ಕುಮಟಾ: `ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡರೆ ಬದುಕು ಸುಲಲಿತ\’ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯ ಚಾತುರ್ಮಾಸ್ಯದಲ್ಲಿರುವ ಅವರು ಆಶೀರ್ವಚನ ನೀಡಿದ ಅವರು `ಕಾಲವನ್ನು ಮೀರಬೇಕಾದರೆ ಅದರ ಪರಿಭಾಷೆ ಅರ್ಥ ಮಾಡಿಕೊಳ್ಳಬೇಕು. ಗ್ರಹ, ರಾಶಿ, ನಕ್ಷತ್ರ, ವಾರ ಹೀಗೆ ವಿವಿಧ ಅಂಶಗಳ ಮೂಲಕ ಕಾಲನ ಭಾಷೆ ಅರ್ಥ ಮಾಡಿಕೊಳ್ಳಬಹುದು. ಗ್ರಹಚಕ್ರ ಎಂದರೆ ಪ್ರಕೃತಿ. ಇವುಗಳ ಚಲನೆಗೆ ಅನುಗುಣವಾಗಿ ಬದುಕು ಬದಲಾಗುತ್ತಾ ಹೋಗುತ್ತದೆ\’ ಎಂದರು. `ಕಾಲದ ಭಾಷೆ ಅರ್ಥ ಮಾಡಿಕೊಂಡರೆ ಜೀವನವನ್ನೇ ಅರ್ಥ ಮಾಡಿಕೊಳ್ಳಬಹುದು. ಒಳಿತು ಕೆಡುಕುಗಳನ್ನು ಇದರಿಂದ ತಿಳಿದುಕೊಳ್ಳಬಹುದು\’ ಎಂದು ಹೇಳಿದರು.