ಕುಮಟಾ: ರಭಸ ಗಾಳಿ – ಧಾರಾಕಾರ ಮಳೆ ಪರಿಣಾಮ ಹನೇಹಳ್ಳಿಯಲ್ಲಿ ರಸ್ತೆ ಮೇಲೆ ವಿದ್ಯುತ್ ಕಂಬ ಮುರಿದಿದೆ.
ಇಲ್ಲಿನ ಶ್ರೀನಿವಾಸ ನಾಯಕ ಅವರ ಕಪೌಂಡ್ ಪಕ್ಕ ಮೂರು ಕಂಬ ಮುರಿದಿದೆ. ಇದರಿಂದ 15ಕ್ಕೂ ಅಧಿಕ ಮನೆಗಳ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಸ್ಥಳಕ್ಕೆ ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಮುರಿದ ಕಂಬ ಬದಲಿಸದ ಕಾರಣ ಜನ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿದರೆ ಅವರು ಉಡಾಫೆಯಿಂದ ಮಾತನಾಡುವ ಬಗ್ಗೆ ಶ್ರೀನಿವಾಸ ನಾಯಕ ಆರೋಪಿಸಿದರು.