ಯಲ್ಲಾಪುರ: ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹುಟಕಮನೆ ಶಾಲೆಯ ಶಿಕ್ಷಕ ಸುಬ್ರಾಯ ಭಟ್ ಚಿನ್ನದ ಪದಕ ಪಡೆದಿದ್ದಾರೆ.
ಯೋಗ ಪೆಡರೇಶನ್ ಆಫ್ ಇಂಡಿಯಾದವರು ಈ ಸ್ಪರ್ಧೆ ಆಯೋಜಿಸಿದ್ದರು. 50-60 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಅವರು ಈ ಬಹುಮಾನ ಪಡೆದಿದ್ದಾರೆ. ಸುಬ್ರಾಯ ಭಟ್ಟ ಅವರು ಕಳೆದ 14 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿದ್ದು, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಯೋಗ ವಿಸ್ತಾರಕರಾಗಿದ್ದಾರೆ.