ಶಿರಸಿ: ಗದ್ದೆಗೆ ಹೋಗಿದ್ದ ರಾಜೇಶ ಗಣಪತಿ ನಾಯ್ಕ (38) ಹಳ್ಳದಲ್ಲಿ ಬಿದ್ದು ಸಾವನಪ್ಪಿದ್ದಾರೆ.
ತಾರಗೋಡು ಬಳಿಯ ಸದಾಶಿವಳ್ಳಿ ಗುಡೆಕೊಪ್ಪದ ರಾಜೇಶ ನಾಯ್ಕ ಜುಲೈ 28ರಂದು ಕೃಷಿ ಚಟುವಟಿಕೆ ನಡೆಸಲು ತಮ್ಮ ಗದ್ದೆಗೆ ತೆರಳಿದ್ದರು. ಭತ್ತದ ನಾಟಿಗೆ ತಯಾರಿ ಮಾಡುತ್ತಿದ್ದ ವೇಳೆ ಅವರು ಕಾಲು ಜಾರಿ ಅಲ್ಲಿದ್ದ ಹಳ್ಳದಲ್ಲಿ ಬಿದ್ದು ಗಾಯಗೊಂಡಿದ್ದರು. ತಲೆ, ಕುತ್ತಿಗೆಗೆ ಅಪಾರ ಪ್ರಮಾಣದಲ್ಲಿ ಪೆಟ್ಟಾಗಿ ಅವರು ಸಾವನಪ್ಪಿದ್ದಾರೆ.