ಹೊನ್ನಾವರ: ಲಿಂಗನಮಕ್ಕಿ ಹಾಗೂ ಗೇರಸೊಪ್ಪ ಜಲಾಶಯಗಳಿಂದ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದ್ದು, ನೆರೆ ಪ್ರದೇಶದ ಜನರಿಗೆ ಸ್ಥಳದಿಂದ ಹೊರ ಹೋಗುವಂತೆ ಸೂಚಿಸಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ನಗರಬಸ್ತಿಕೇರಿ, ಉಪೋಣಿ, ಹೆರಂಗಡಿ ಹಾಗೂ ಜಲವಳಿ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ ಸ್ಥಳಾಂತರವಾಗುವoತೆ ಜನರಿಗೆ ಸೂಚಿಸಲಾಗಿದೆ. ಇದರೊಂದಿಗೆ ಶರಾವತಿ ಗುಂಡಬಾಳ ನದಿ ತೀರದ ಜನತೆಗೆ ಧ್ವನಿ ವರ್ಧಕ ಬಳಸಿಯೂ ಮುನ್ನಚ್ಚರಿಕೆ ನೀಡಲಾಗಿದೆ.