ಹೊನ್ನಾವರ: ಬಳಕೂರು ಗ್ರಾಮದ ಚಿಕನ್ ಅಂಗಡಿಯಲ್ಲಿ ಜಗದೀಶ್ ನಾಯ್ಕ ಎಂಬಾತ ಓಸಿ ಆಟಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿದ್ದಾರೆ.
ಆತನ ಬಳಿಯಿದ್ದ 730ರೂಪಾಯಿ ಜೊತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೇಲಿನ ಇಡಗುಂಜಿಯ ಜಗದೀಶ ನಾಯ್ಕ ಬಳಕೂರಿನಲ್ಲಿ ಚಿಕನ್ ಅಂಗಡಿ ಹೊಂದಿದ್ದ. ಅಲ್ಲಿನ ಕೆಲಸದ ಜೊತೆ ಜೂಜಾಟವನ್ನು ನಡೆಸಿ ಹಣಗಳಿಸುತ್ತಿದ್ದ. ಜುಲೈ 29ರಂದು ಸಹ ಅಂಗಡಿ ಮುಂದೆ ನಿಂತು 1 ರೂಪಾಯಿಗೆ 80 ರೂ ಕೊಡುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿದ್ದ. ಈ ವಿಷಯ ಅರಿತ ಪಿಸೈ ಭರತಕುಮಾರ್ ಅಲ್ಲಿಗೆ ತೆರಳಿದ್ದು, ಆತನ ಬಳಿಯಿದ್ದ ಓಸಿ ಲೆಕ್ಕಾಚಾರದ ಪಟ್ಟಿಯನ್ನು ಜಪ್ತು ಮಾಡಿದರು.