ಶಿರಸಿ: ನೆಹರು ನಗರದ ಸ.ಕಿ.ಪ್ರಾ.ಉರ್ದು ಶಾಲೆ ಮಳೆಗೆ ಸೋರುತ್ತಿದೆ.
ನೆಲ ಪೂರ್ತಿ ನೀರಿನಿಂದ ತುಂಬಿರುವುದರಿoದ ಪದೇ ಪದೇ ಒರೆಸಿ ಅಲ್ಲಿಕೂರಬೇಕಾದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ. `ಒಂದೆರಡು ಕಡೆ ಸೋರುತ್ತಿದ್ದರೆ ಪರವಾಗಿಲ್ಲ. ಅಲ್ಲಿ ಬಕೆಟ್ ಇಟ್ಟಾದರೂ ಪರಿಸ್ಥಿತಿ ಸುಧಾರಿಸಬಹುದಾಗಿತ್ತು. ಆದರೆ, ಇಡೀ ಕಟ್ಟಡ ಸೋರುತ್ತಿದ್ದರೆ ಎಲ್ಲಿ ಬಕೇಟ್ ಹಿಡಿಯುವುದು?\’ ಎಂಬುದು ಇಲ್ಲಿನವರ ಪ್ರಶ್ನೆ.
`ಸುರಿಯುತ್ತಿರುವ ಮಳೆಗೆ ಶಾಲೆಯ ಹಂಚು ತೊಟ್ಟಿಕ್ಕುತ್ತಿದೆ. ಕೆಲ ಹಂಚುಗಳು ಒಡೆದಿವೆ. ಗೋಡೆ ಸಹ ಬೀಳುವ ಹಂತದಲ್ಲಿದೆ. ಇಂಥ ಭಯದ ವಾತಾವರಣದಲ್ಲಿ ಮಕ್ಕಳಿಗೆ ಪಾಠ ಹೇಳಬೇಕು\’ ಎಂಬುದು ಶಿಕ್ಷಕರ ಅಳಲು.