ಜೊಯಿಡಾ: ಅಣಶಿ, ಕುಂಡಲ, ಡಿಗ್ಗಿ, ಕ್ಯಾಸಲರಾಕ, ಅಖೇತಿ, ಗುಂದ, ಕುಂಬಾರವಾಡಾ ಈ ಭಾಗದಲ್ಲಿ ಸುರಿದ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ.
ನಾಟಿ ಮಾಡಿದ ಹಾಗೂ ನಾಟಿ ಮಾಡಲು ಇರಿಸಿದ್ದ ಭತ್ತ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇದನ್ನು ನಂಬಿ ಬದುಕುತ್ತಿದ್ದವರು ಕಂಗಾಲಾಗಿದ್ದಾರೆ. ಈ ವರ್ಷ ಊಟಕ್ಕೂ ಅಕ್ಕಿ ಸಿಗದ ಬಗ್ಗೆ ಅಲ್ಲಿನವರು ಆತಂಕದಲ್ಲಿದ್ದಾರೆ.
ಡೇರಿಯಾ ಗ್ರಾಮದ ರೈತ ರಾಯಾ ನಾರಾಯಣ ಡೇರೆಕರ, ನರಸಿಂಹ ಡೇರೆಕರ, ಹೇಮಂತ್ ಡೇರೆಕರ, ಜಯಂತ ಗಣೇಶ ಗಾವಡಾ ಅವರ ಭತ್ತದ ಗದ್ದೆ ಮುಳುಗಿದೆ. ಜೊತೆಗೆ ಕಬ್ಬು, ಅಡಿಕೆ, ಬಾಳೆ ಸಹ ಮಳೆ ನೀರಿನ ಪಾಲಾಗಿದೆ.