ಕರಾವಳಿ ತಾಲೂಕುಗಳಲ್ಲಿ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಮಲೆನಾಡು ತಾಲೂಕುಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸುರಿಯುತ್ತಿದೆ. ಈ ವರ್ಷ ಈವರೆಗೂ ದೊಡ್ಡ ಮಳೆ ಕಾಣದ ಹಳಿಯಾಳ ಹಾಗೂ ಮುಂಡಗೋಡದಲ್ಲಿ ಮಂಗಳವಾರ ವಿಪರೀತ ಮಳೆ ಸುರಿದಿದೆ.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ ಯಲ್ಲಾಪುರದಲ್ಲಿ 86.6ಮಿಮೀ ಮಳೆಯಾಗಿದೆ. ಶಿರಸಿಯಲ್ಲಿ 74.5 ಮಿಮೀ ಹಾಗೂ ಸಿದ್ದಾಪುರದಲ್ಲಿ 67.4 ಮಿಮೀ ಮಳೆಯಾಗಿದೆ. ಜೊಯಿಡಾ 81.4 ಮಿಮೀ, ಮುಂಡಗೋಡ 38.4 ಮಿಮೀ ಮಳೆಯಾಗಿದೆ. ದಾಂಡೇಲಿ 42.6 ಮಿಮೀ ಹಾಗೂ ಹಳಿಯಾಳ 46.4 ಮಿಮೀ ಮಳೆಯಾಗಿದೆ. ಇನ್ನೂ ಕರಾವಳಿ ಭಾಗದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅಂಕೋಲಾ 17.5 ಮಿಮೀ, ಭಟ್ಕಳ 5.6ಮಿಮೀ, ಹೊನ್ನಾವರ 10.8 ಮಿಮೀ, ಕಾರವಾರ 5.5 ಮಿಮೀ ಹಾಗೂ ಕುಮಟಾ 6.8 ಮಿಮೀ ಮಳೆ ಸುರಿದಿದೆ.
ಜಲಾಶಯಗಳ ನೀರಿನ ಮಟ್ಟ ಇಲ್ಲಿ ನೋಡಿ..