ಕಾರವಾರ: ಅಮದಳ್ಳಿ ಟೋಲ್ನಾಕಾ ಬಳಿ ವಾಸವಾಗಿದ್ದ ಕೇರಳ ಮೂಲಕ ಚಂದನ್ ಕುರುಂಬನ್ (60) ಮಲಗಿದಲ್ಲಿಯೇ ಸಾವನಪ್ಪಿದ್ದಾರೆ.
ಜುಲೈ 28ರ ರಾತ್ರಿ 9 ಗಂಟೆಗೆ ಊಟ ಮಾಡಿ ಮಲಗಿದ್ದ ಚಂದನ್ ಬೆಳಗ್ಗೆ ಎದ್ದಿರಲಿಲ್ಲ. ಮೆಕ್ಕೋನ್ ಕಂಪನಿಯಲ್ಲಿ ಕೆಲಸ ಮಾಡುವ ರಿಜು ಪಿಎ ಅವರನ್ನು ಎಬ್ಬಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಚಂದನ್ ಉಸಿರಾಡದೇ ಇರುವುದನ್ನು ನೋಡಿದ ರಾಜು ಅವರ ಪುತ್ರಿ ನೀತುವಿಗೆ ಮಾಹಿತಿ ನೀಡಿದ್ದು, ನೀತು ಆಗಮಿಸಿದ ನಂತರ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಅಲ್ಲಿ ಚಂದನ್ ಸಾವನಪ್ಪಿರುವ ಬಗ್ಗೆ ಮರಣಪತ್ರ ನೀಡಿದರು. ನಂತರ ಶವವನ್ನು ಅವರ ಹುಟ್ಟೂರಿಗೆ ಒಯ್ಯಲಾಯಿತು.