ಕಾರವಾರ: ಕೋಡಿಭಾಗದ ಅರಣ್ಯ ವಸತಿಗೃಹದ ಬಳಿ ಇದ್ದ ಅಕ್ರಮ ಸರಾಯಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿರುವ ಎಲ್ಲಾ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದು, ಇನ್ಮುಂದೆ ಅಲ್ಲಿ ಸರಾಯಿ ಸಿಗಲ್ಲ!
ಅಳವೆವಾಡದ ಕೋಡಿಭಾಗದ ಸೇತುವೆ ತಳಭಾಗ ವಿನಾಯಕ ಪೆಡ್ನೇಕರ್ ಎಂಬಾತ ಅನೇಕ ವರ್ಷಗಳಿಂದ ಕಿರಾಣಿ ಅಂಗಡಿ ನಡೆಸುತ್ತಿದ್ದ. ಗೋವಾದ ಅಕ್ರಮ ಸರಾಯಿಯನ್ನು ಅಲ್ಲಿ ಮಾರಾಟ ಮಾಡುತ್ತಿದ್ದ. ಜುಲೈ 30ರಂದು ಮಧ್ಯಾಹ್ನ ಪಿಸೈ ರವೀಂದ್ರ ಬೀರಾದರ್ ಆ ಅಂಗಡಿ ಮೇಲೆ ದಾಳಿ ನಡೆಸಿದ್ದು, ಅಲ್ಲಿದ್ದ 15560ರೂ ಮೌಲ್ಯದ ಗೋವಾ ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಆಕರ್ಷಕ ಗಾಜು ಹಾಗೂ ಪ್ಲಾಸ್ಟಿಕ್ ಸೇರಿ ಒಟ್ಟು 76 ಮದ್ಯದ ಬಾಟಲಿಗಳು ಕಿರಾಣಿ ಅಂಗಡಿಯಲ್ಲಿ ದೊರೆತಿದೆ.