ಕುಮಟಾ: ಮಳೆಹಾನಿಯಿಂದ ಸ್ಥಗಿತಗೊಂಡಿದ್ದ ಕುಮಟಾ-ಬಡಾಳ-ಸಿದ್ದಾಪುರ ಬಸ್ಸು ಮಂಗಳವಾರ ಮತ್ತೆ ಓಡಾಟ ಶುರು ಮಾಡಿದೆ.
ಆದರೆ, `ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇತುವೆ ಬಳಿ ಇಳಿದು ಖಾಲಿ ಬಸ್ಸನ್ನು ಮಾತ್ರ ಸೇತುವೆ ಮೆಲೆ ಓಡಾಡಲು ಅನುವು ಮಾಡಿಕೊಡಬೇಕು. ಬಸ್ಸು ಸೇತುವೆ ದಾಡಿದ ನಂತರ ಮತ್ತೆ ಎಲ್ಲರೂ ಬಸ್ಸು ಏರಬೇಕು\’ ಎಂಬ ಷರತ್ತು ವಿಧಿಸಲಾಗಿದೆ. ಅಟ್ಲಗುಂಡಿ ಸೇತುವೆಯ ಮಧ್ಯದ ಕಂಬ ಕುಸಿದ ಹಿನ್ನೆಲೆಯಲ್ಲಿ ಭಾರೀ ವಾಹನ ಓಡಾಟವನ್ನು ಲೋಕೋಪಯೋಗಿ ಇಲಾಖೆ ನಿಷೇಧಿಸಿತ್ತು. ಹೀಗಾಗಿ ಬಸ್ ಸಹ ಓಡಾಡುತ್ತಿರಲಿಲ್ಲ. ಇದರಿಂದ ಈ ಮಾರ್ಗದಿಂದ ಬರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ದೂರಿದ್ದರು. ಭುವನ್ ಭಾಗ್ವತ್ ಡಿಪೋ ವ್ಯವಸ್ಥಾಪಕರ ಜೊತೆ ಮಾತನಾಡಿದ್ದರು. `ಸೇತುವೆ ಬಳಿ ಬಸ್ಸಿನಲ್ಲಿದ್ದ ಜನ ಎಲ್ಲರೂ ಇಳಿಯಬೇಕು. ಬಸ್ ಸೇತುವೆ ದಾಟಿದ ನಂತರ ಮತ್ತೆ ಹತ್ತಬೇಕು\’ ಎಂಬ ಷರತ್ತು ವಿಧಿಸಿ ಬಸ್ ಓಡಿಸಿದರು. ಬಸ್ಸು ಓಡಾಟದಿಂದ ಸಂತೆಗುಳಿ, ಬಡಾಳ, ಸೊಪಿನಹೊಸಳ್ಳಿ ಭಾಗದವರಿಗೆ ಅನುಕೂಲವಾಗಿದೆ.