ಕುಮಟಾ ತಾಲೂಕು ಕಾನೂನು ಸೇವಾ ಸಮಿತಿಗೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಹುಡುಕಾಟ ನಡೆದಿದೆ.
ಯುವ ಸಮುದಾಯ, ನಿವೃತ್ತ ಅಧಿಕಾರಿ-ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರಿಗೂ ಅವಕಾಶವಿದೆ. ಕುಮಟಾ ತಾಲೂಕು ವ್ಯಾಪ್ತಿಯ ಸಮಾಜ ಸೇವೆಯಲ್ಲಿ ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು. ನ್ಯಾಯಾಲಯದ ಕುರಿತು ಚಟುವಟಿಕೆ ನಡೆಸಿದರೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ 500ರೂ ಹಾಗೂ ಅರ್ದ ದಿನ ಕೆಲಸ ಮಾಡಿದರೆ 250ರೂ ಗೌರವಧನ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಅಗಸ್ಟ 3 ಕೊನೆದಿನ.
ಅರ್ಜಿ ಇಲ್ಲಿ ಸಲ್ಲಿಸಿ
ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ
ಕುಮಟಾ ತಾಲೂಕು ನ್ಯಾಯಾಲಯ ಆವರಣ,
ಕುಮುಟಾ -581343