ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಜುಲೈ 31ರ ಬುಧವಾರ ಕರಾವಳಿ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಬುಧವಾರ ಬೆಳಗ್ಗೆ 7.20ಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ. ಅಂಗನವಾಡಿಗಳಿಗೂ ಈ ರಜೆ ಸಿಗಲಿದೆ. ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಜೊತೆ ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಈ ರಜೆ ನಿಯಮ ಅನ್ವಯ.
ಮಲೆನಾಡು ಭಾಗದ ಶಾಲೆಗಳು ಎಂದಿನ0ತೆ ಕಾರ್ಯ ನಿರ್ವಹಿಸಬೇಕಿದೆ.