ಯಲ್ಲಾಪುರ: ಗಣಿಗಾರಿಕೆ ನಡೆಸಿದ ನಂತರ ಆ ಪ್ರದೇಶದಲ್ಲಿ ನಿರ್ಮಿಸಿದ ಹೊಂಡವನ್ನು ಸಮದಟ್ಟಾಗಿ ಮುಚ್ಚಬೇಕು ಎಂಬುದು ನಿಯಮ. ಆದರೆ, ಬಿಸಯೋಡಿನಲ್ಲಿ 1996ರ ಆಸುಪಾಸಿನಲ್ಲಿ ನಡೆದ ಗಣಿಕಾರಿಕೆಯ ಹೊಂಡಗಳನ್ನು ಈವರೆಗೂ ಮುಚ್ಚಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
`ಈ ಹಿಂದೆ ಇಲ್ಲಿನ ಆನೆಹೊಂಡದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಾಗ ಭೂಮಿ ಸಡಿಲಗೊಂಡು ಭೂ ಕುಸಿತ ಉಂಟಾಗಿತ್ತು. ಭಾರೀ ಗಾತ್ರದ ಯಂತ್ರಗಳನ್ನು ಬಳಸಿ ಗಣಿಗಾರಿಕೆ ಮಾಡಿದ್ದರಿಂದ ಈ ಭಾಗದ ಮಣ್ಣು ಸಡಿಲಗೊಂಡಿರುವ ಅನುಮಾನಗಳಿವೆ. ಗಣಿ ಪ್ರದೇಶದ ಹೊಂಡಗಳಲ್ಲಿ ದೊಡ್ಡ ಪ್ರಮಾಣದ ನೀರು ನಿಂತಿರುವುದರಿoದ ಇಲ್ಲಿಯೂ ಭೂ ಕುಸಿತದ ಅಪಾಯವಿದೆ\’ ಎಂದು ಆರ್ ಜಿ ಭಟ್ಟ ಆತಂಕವ್ಯಕ್ತಪಡಿಸಿದರು. `ಅವಘಡ ನಡೆಯುವ ಮುನ್ನ ಎಚ್ಚೆತ್ತುಕೊಳ್ಳುವುದು ಅನಿವಾರ್ಯ\’ ಎಂದವರು ಪ್ರತಿಪಾದಿಸಿದರು.