ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿಯೂ ಜೂಜು ಅಡ್ಡೆಗಳಿದ್ದು, ಪೊಲೀಸರು ಅದರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದರಿಂದ ಮಟ್ಕಾ ಹಾಗೂ ಇಸ್ಪಿಟ್ ಆಟಗಾರರಿಗೆ ನಡುಕ ಹುಟ್ಟಿದೆ.
ಜಿಲ್ಲೆ ಹಲವು ಗೂಡಂಗಡಿಗಳಲ್ಲಿ ಮಟ್ಕಾ ಆಟ ನಡೆಯುತ್ತಿದೆ. 1 ರೂಪಾಯಿ ಹೂಡಿಕೆ ಮಾಡಿದರೆ 80 ರೂ ಸಿಗುವ ಆಸೆಯಿಂದ ನಿತ್ಯ ಸಾವಿರಾರು ಜನ ಲಕ್ಷಾಂತರ ರೂ ಹಣಕಟ್ಟಿ ದುಡಿಮೆಯ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಜೂಜಾಟದಲ್ಲಿ ನಿರತರಾದವರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು. ಇದನ್ನು ಅರಿತ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಜೂಜುಕೋರರ ಮೇಲೆ ಪ್ರಕರಣ ದಾಖಲಿಸುತ್ತಿದ್ದು, ಮಾಸಿಕ ಮಾಮೂಲಿ ಪಡೆದು ಜೂಜಿಗೆ ಅವಕಾಶ ನೀಡಿದ್ದ ಪೊಲೀಸರ ಎದೆಯಲ್ಲಿ ಇದೀಗ ಡವ ಡವ ಶುರುವಾಗಿದೆ.
ಇನ್ನೂ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಸ್ಪಿಟ್ ಅಡ್ಡೆಗಳು ಜೋರಾಗಿವೆ. ಕೆಲವರು ರೆಸಾರ್ಟ ಹಾಗೂ ಹೊಟೇಲ್\’ಗಳಲ್ಲಿ ಕುಳಿತು ಇಸ್ಪಿಟ್ ಆಡುತ್ತಿದ್ದಾರೆ. ಕೆಲ ಸರ್ಕಾರಿ ಹಾಗೂ ನಿವೃತ್ತ ನೌಕರರು ಸಹ ಇಸ್ಪಿಟ್ ದಾಸರಾಗಿದ್ದು, ಅಂಥವರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ. ಹಣಕಟ್ಟಿ ಇಸ್ಪಿಟ್ ಆಡುವವರನ್ನು ಹಿಡಿದು ಜೈಲಿಗೆ ಅಟ್ಟುತ್ತಿದ್ದಾರೆ. ಸೈಬರ್ ಪೊಲೀಸರ ಸಹಾಯ ಪಡೆದು ಈ ದಾಳಿ ನಡೆಯುತ್ತಿದೆ.
ಸಾಮಾನ್ಯವಾಗಿ ಪೊಲೀಸ್ ಕಾನ್ಸಟೇಬಲ್\’ಗಳನ್ನು ಹಿರಿಯ ಅಧಿಕಾರಿಗಳು ಹತ್ತಿರವೂ ಬಿಟ್ಟಿಕೊಳ್ಳುವುದಿಲ್ಲ. ಆದರೆ, ಈಗಿನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ತಳಹಂತದ ಪೊಲೀಸ್ ಸಿಬ್ಬಂದಿಯಿAದ ವಿವಿಧ ಮಾಹಿತಿ ಸಂಗ್ರಹಿಸಿ ತಮ್ಮ ಅಧೀನ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡಿದ ಎಂ ನಾರಾಯಣ ತಳಹಂತದ ಸಿಬ್ಬಂದಿಯ ವಿಶ್ವಾಸಗಳಿಸಿದ್ದರಿಂದ ಜಿಲ್ಲೆಯ ಮೂಲೆ ಮೂಲೆಯ ಮಾಹಿತಿ ಅವರ ಮೊಬೈಲ್ ತಲುಪುತ್ತಿದೆ.
`ಜೂಜು ಅಡ್ಡೆಯ ಮೇಲೆ ನೀವು ದಾಳಿ ಮಾಡಿ. ಇಲ್ಲವಾದಲ್ಲಿ ನಾನು ನಿಮ್ಮ ಮೇಲೆ ದಾಳಿ ಮಾಡುತ್ತೇನೆ\’ ಎಂದು ಅಧೀನ ಅಧಿಕಾರಿಗಳಿಗೆ ಎಸ್ಪಿ ನಾರಾಯಣ ತಾಕೀತು ಮಾಡಿದ್ದಾರೆ.