ಶಿರಸಿ: ಚಿಪಗಿ ಹಂಚಿನಕೇರಿಯ ಮಹಮದ್ ಮುಲ್ಲಾ ಎಂಬಾತರಿಗೆ ಬಿಳಿ ಬಣ್ಣದ ಬೊಲೆರೋ ಪಿಕಪ್ ಡಿಕ್ಕಿ ಹೊಡೆದಿದ್ದು, ಆ ಬುಲೋರೋ ಯಾವುದು? ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ಟೈಲ್ಸ್ ಕೆಲಸ ಮಾಡುವ ಮಹಮದ್ ಮುಲ್ಲಾ (21) ಜುಲೈ 29ರಂದು ಶಿರಸಿಯ ಕಾಮತ್ ಫರ್ಮ ಹೌಸ್ ಹತ್ತಿರ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಬಿಳಿ ಬಣ್ಣದ ಪಿಕಪ್ ಆತನಿಗೆ ಗುದ್ದಿದೆ. ಇದರಿಂದ ಮಹಮದ್ ಜೊತೆ ಬೈಕಿನ ಹಿಂಬದಿ ಸವಾರ ಸಾಹಿಲ್ ಖಾನ್\’ಗೆ ಸಹ ಗಾಯವಾಗಿದೆ. ಬಿಳಿ ಬಣ್ಣದ ಪಿಕಪ್ ವಿರುದ್ಧ ಕ್ರಮ ಜರುಗಿಸುವಂತೆ ಸಂತ್ರಸ್ತ ಇದೀಗ ಪೊಲೀಸ್ ದೂರು ನೀಡಿದ್ದು, ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.