ಶಿರಸಿ: ಹುಣಸೆಮಕ್ಕಿ ಎಡಮನೆ ಗೋಪಾಲಕೃಷ್ಣ ಹೆಗಡೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ವೀರಭದ್ರ ವಾಲೇಕರ್ (28) ಎಂಬಾತರು ತೋಟದಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾನಗಲ್ ಮೂಲದ ವೀರಭದ್ರ ವಾಲೇಕರ್ ಕಳೆದ ಅನೇಕ ದಿನಗಳಿಂದ ಮಂಕಾಗಿದ್ದರು. ಆದರೆ, ಯಾವುದೇ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಜುಲೈ 30ರ ಸಂಜೆ ತಾವು ವಾಸವಿದ್ದ ಬಿಡಾರದಲ್ಲಿ ನೇಣು ಹಾಕಿಕೊಂಡು ಅವರು ಸಾವನಪ್ಪಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.