ಕುಮಟಾ: ಗಂಗಾವಳಿ ಸರ್ಕಾರಿ ಶಾಲೆ ಕೊಠಡಿ ಶಿಥಿಲಗೊಂಡಿದ್ದರಿoದ ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ಇದೀಗ ಆ ಕಟ್ಟಡ ಸಹ ದುರಸ್ತಿ ಹಂತದಲ್ಲಿದೆ.
ಹೀಗಾಗಿ ಇಲ್ಲಿ ಕಲಿಯುವ ಮಕ್ಕಳಿಗೆ ಯೋಗ್ಯ ಕಟ್ಟಡವೂ ಇಲ್ಲ. ಅನಿವಾರ್ಯವಾಗಿ ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರಸ್ತುತ ಶಾಲಾ ಕೊಠಡಿಗೆ ಬಿರುಕು ಮೂಡಿದೆ. ಈ ಬಗ್ಗೆ ಗ್ರಾ ಪಂ ಸದಸ್ಯರಿಂದ ಹಿಡಿದು ಶಾಸಕ-ಸಚಿವರವರೆಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಶಾಲೆಯಲ್ಲಿ 160 ಮಕ್ಕಳಿದ್ದು, ಅವರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲ.
ಇಲ್ಲಿ ಶಿಥಿಲಗೊಂಡ ಆರು ಕೋಣೆಗಳಲ್ಲಿ ಎಂಟು ಶಿಕ್ಷಕರು ಪಾಠ ಮಾಡಬೇಕಿದೆ. ಅದರಲ್ಲಿಯೂ ಒಂದು ಕೊಠಡಿ ಸಂಪೂರ್ಣ ಹಾಳಾಗಿದೆ. ಕೆಲವು ಕೊಠಡಿಗಳ ಛಾವಣಿ ಸಹ ಮುರಿದಿದೆ.