
ಸಿದ್ದಾಪುರ: ಓಮಿನಿ ಹಾಗೂ ಸರ್ಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಓಮಿನಿಯ ಸಹ ಸವಾರ ಗಾಯಗೊಂಡಿದ್ದಾನೆ.
ಜುಲೈ 30ರಂದು ಕೆಎಸ್ಆರ್ಟಿಸಿ ಬಸ್ ಚಾಲಕ ಮಂಜುನಾಥ ಬಂಡಿ ಕುಮಟಾದಿಂದ ಸಿದ್ದಾಪುರಕ್ಕೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಎದುರಿನಿಂದ ಓಮಿನಿ ಓಡಿಸಿಕೊಂಡು ಬಂದ ರಜನಸಾಬ್ ಎಂಬಾತ ಹಸ್ಟಿಗುಳಿಯಲ್ಲಿ ಬಸ್ಸಿಗೆ ಗುದ್ದಿದ್ದು, ಓಮಿನಿಯಲ್ಲಿದ್ದ ಮುಸ್ತಪಾ ಸಾಬ್ ಎಂಬಾತನಿಗೆ ಗಾಯವಾಗಿದೆ. ಈ ಅಪಘಾತದಲ್ಲಿ ಓಮಿನಿ ಜಖಂ ಆಗಿದ್ದು, ಬಸ್ಸಿನ ಬಂಪರ್\’ಗೆ ಸಹ ಹಾನಿಯಾಗಿದೆ.