ಹೊನ್ನಾವರ: ಮೂರು ಬಾರಿ ಎಚ್ಚರಿಕೆ ನೀಡಿದ ನಂತರ ಲಿಂಗನಮಕ್ಕಿ ಅಣೆಕಟ್ಟಿನ ಮೂರು ಗೇಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಗುರುವಾರ ಬೆಳಗ್ಗೆಯಿಂದ ನೀರು ಹೊರಬಿಡಲಾಗಿದ್ದು, ಹಂತ ಹಂತವಾಗಿ ನೀರು ಬಿಡುತ್ತಿರುವುದರಿಂದ ನೆರೆ ಭೀತಿ ಎದುರಾಗಿಲ್ಲ.
ಅಂದಾಜು 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಶುಕ್ರವಾರ ಮುಂಜಾನೆಯವರೆಗೂ ನೀರು ಹೊರಬಿಡುವ ಪ್ರಕ್ರಿಯೆ ಮುಂದುವರೆಯಲಿದೆ. ಅಣೆಕಟ್ಟು ಗರಿಷ್ಟ ಮಟ್ಟ ತುಂಬದೇ ಇದ್ದರೂ ಮುನ್ನಚ್ಚರಿಕಾ ಕ್ರಮವಾಗಿ ನೀರು ಹೊರಬಿಡಲಾಯಿತು. ನೀರಿನ ಒಳಹರಿವು ಗಮನಿಸಿ ಸಮತೋಲನ ಕಾಪಾಡಿಕೊಳ್ಳುತ್ತಿರುವುದರಿಂದ ನೆರೆ ಪ್ರವಾಹದ ಆತಂಕ ಎದುರಾಗಿಲ್ಲ.