
ಕುಮಟಾ: ಬೆಟ್ಟುಳ್ಳಿ ಕಮಾನಿನ ಎದುರು ಸ್ಕೂಟಿಯಿಂದ ಬಿದ್ದ ಪರಿಣಾಮ ಬೆಟ್ಟುಳ್ಳಿ ಗ್ರಾಮದ ಆದಮ್ ಮುಲ್ಲಾ ಗಾಯಗೊಂಡಿದ್ದು, ಈ ಅಪಘಾತದಲ್ಲಿ ಆತನ ಪತ್ನಿ ಗುಲ್ಬಮಾ\’ಗೂ ಗಾಯವಾಗಿದೆ.
ಜುಲೈ 30ರಂದು ಕುಮಟಾದಿಂದ ಅಂಕೋಲಾ ಕಡೆಗೆ ಆದಮ್ ಮುಲ್ಲಾ ಸ್ಕೂಟಿ ಓಡಿಸುತ್ತಿದ್ದ. ಅತ್ಯಂತ ವೇಗ ಹಾಗೂ ನಿರ್ಲಕ್ಷವಹಿಸಿದ್ದರಿಂದ ಸ್ಕೂಟಿ ನೆಲಕ್ಕೆ ಅಪ್ಪಳಿಸಿದೆ. ಹಿಂಬದಿ ಕೂತಿದ್ದ ಗುಲ್ಬಮಾರ ತಲೆಗೆ ಹೆಚ್ಚಿನ ಪೆಟ್ಟಾಗಿದೆ. ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.