ಭಟ್ಕಳ: ಮಾರಿಕಾಂಬಾ ದೇವಿ ಗದ್ದುಗೆ ಏರುವುದರ ಮೂಲಕ ಮಾರಿಜಾತ್ರೆಗೆ ಚಾಲನೆ ದೊರೆತಿದ್ದು, ಅಪಾರ ಭಕ್ತರು ದೇವಿ ದರ್ಶನ ಪಡೆದರು.
ಮಾರಿ ದೇವಿ ಮೂರ್ತಿಯ ತಯಾರಕ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆ ನಡೆದಿದ್ದು, ನಂತರ ಮಾರಿ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಜೈನ ಸಮುದಾಯದವರಿಂದ ಮಾರಿ ದೇವಿಗೆ ಮೊದಲ ಪೂಜೆ ಸಲ್ಲಿಸಲಾಯಿತು. ಬೇರೆ ಬೇರೆ ಊರುಗಳಿಂದ ಬಂದ ಜನ ದೇವಿ ದರ್ಶನ ಪಡೆದರು.
ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳು ಬಾರದೇ ತಡೆಗಟ್ಟುವಂತೆ ಭಕ್ತರು ದೇವಿಯಲ್ಲಿ ಬೇಡಿಕೊಂಡರು. ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿದರು.