ಹೊನ್ನಾವರ: ಸುರಿದ ಧಾರಾಕಾರ ಮಳೆಗೆ ಹೊಸಾಕುಳಿ ಗ್ರಾಮದ ಮನೆಯೊಂದು ಕುಸಿದಿದೆ.
ಇಲ್ಲಿನ ಭಾಸ್ಕೇರಿ ವಾರ್ಡನ ಹರ್ಮನೆ ಎಂಬಲ್ಲಿ ಗುಡ್ಡ ಕುಸಿದಿದ್ದು, ಅಲ್ಲಿನ ಮಣ್ಣು ವಿಘ್ನೇಶ್ವರ ಹೆಗಡೆ ಅವರ ಮನೆಗೆ ಅಪ್ಪಳಿಸಿದೆ. ದೊಡ್ಡದಾದ ಕಲ್ಪಂಬೆ ಉರುಳಿ ಬಂದು ಗೋಡೆಗೆ ಗುದ್ದಿದ್ದು, ಪರಿಣಾಮ ಮನೆಯ ಹಿಂದಿನ ಗೋಡೆಗೆ ಹಾನಿಯಾಗಿದೆ. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.