ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಕೈಗೆ ಬೈಕ್ ನೀಡುವ ಪಾಲಕರ ಸಂಖ್ಯೆ ಹೆಚ್ಚಾಗಿದೆ.
ಕಳೆದ ತಿಂಗಳು ಮಕ್ಕಳ ಕೈಗೆ ಬೈಕ್ ನೀಡಿದ ಪಾಲಕರಿಗೆ ಶಿರಸಿ ನ್ಯಾಯಾಲಯ 25 ಸಾವಿರ ಹಾಗೂ ಕುಮಟಾ ನ್ಯಾಯಾಲಯ 30 ಸಾವಿರ ರೂ ದಂಡ ವಿಧಿಸಿತ್ತು.
ಈ ನಡುವೆ ಅಪ್ರಾಪ್ತರ ಬೈಕ್ ಚಾಲನೆಯಿಂದ ಹಲವು ಅವಾಂತರಗಳು ನಡೆದಿದೆ. ಅಲ್ಲಲ್ಲಿ ಮಕ್ಕಳು ಬೈಕಿನ ಅಡಿ ಬಿದ್ದು ಗಾಯಗೊಂಡಿದ್ದಾರೆ. ಅದಾಗಿಯೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಲ್ಲ.
ಜಿಲ್ಲೆಯಲ್ಲಿ ಪ್ರಸ್ತುತ ರೆಡಾರ್ ಗನ್ ಮೂಲಕ ದ್ವಿಚಕ್ರ ವಾಹನ ಸವಾರರ ಮೇಲೆ ನಿಗಾ ಇರಿಸಲಾಗುತ್ತಿದೆ. ದಾಂಡೇಲಿಯಲ್ಲಿ ಇನ್ನೂ ಪರವಾನಿಗೆ ಪಡೆಯದವರು ಸ್ಕೂಟಿ ಓಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಡ್ಡಾದಿಡ್ಡಿ ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ಪೊಲೀಸರು ಈ ರೀತಿ ಬೈಕ್ ಓಡಿಸುವ ಅಪ್ರಾಪ್ತರ ಪಾಲಕರಿಗೆ ಬಿಸಿ ಮುಟ್ಟಿಸಬೇಕು ಎಂಬ ಮಾತುಗಳು ಕೇಳಿಬಂದಿದೆ.