ಕುಮಟಾ: ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ ಅಂತ್ಯ ಸಂಸ್ಕಾರ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ.
ಈ ಬಗ್ಗೆ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದರು. `59 ವರ್ಷದ ಒಳಗಿನ ವ್ಯಕ್ತಿ ಸಾವನಪ್ಪಿದರೆ ಸರ್ಕಾರ 20000 ರೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ನೀಡುತ್ತದೆ. ಅದೇ 60 ವರ್ಷದ ವ್ಯಕ್ತಿ ಸಾವನಪ್ಪಿದರೆ ಈ ಹಣ ಸಿಗುವದಿಲ್ಲ. ಹೀಗಾಗಿ ಹಿಂದಿನ ಅಂತ್ಯ ಸಂಸ್ಕಾರ ಯೋಜನೆ ಪುನರ್ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಕೆಯಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ್ ಸುಧಾಕರ್ ನಾಯ್ಕ, ಪ್ರಕಾಶ್ ಪಟಗಾರ, ರಾಮ ಕಾರ್ವಿ ಇದ್ದರು.