ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಫೋಟೋ ಬಳಸಿ `ಕನ್ನಡವಾಣಿ\’ ಹೆಸರಿನೊಂದಿಗೆ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. `ಈ ಬಗೆಯ ಹೇಳಿಕೆ ನಾವು ನೀಡಿಲ್ಲ\’ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕನ್ನಡವಾಣಿ ಸಂಪಾದಕಿ ಶುಭಾ ಸಾಗರ್ ಸಹ `ಇಂಥಹ ಸುದ್ದಿಗಳನ್ನು ನಾವು ಪ್ರಕಟಿಸಿಲ್ಲ. ಇದು ಕಿಡಿಗೇಡಿಗಳು ಎಸೆಗಿರುವ ಕೃತ್ಯ\’ ಎಂದು ಖಚಿತಪಡಿಸಿದ್ದಾರೆ. ಕನ್ನಡವಾಣಿ ವೆಬ್ ಪತ್ರಿಕೆಯ ಲೋಗೋ ಬಳಸಿ `ಇನ್ಮುಂದೆ ಶಾಲಾ ಮಕ್ಕಳು ಮೊಬೈಲ್ ಬಳಸುವ ಹಾಗಿಲ್ಲ. ಮಕ್ಕಳು ಮೊಬೈಲ್ ಬಳಸಿದರೆ ಪೋಷಕರ ಮೇಲೆ ಕಠಿಣ ಕ್ರಮ\’ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಬಗ್ಗೆ ವ್ಯಾಪಕ ಪ್ರಮಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ. `ಮಕ್ಕಳು ಮೊಬೈಲ್ ಬಳಸಿದ ವಿಡಿಯೋವನ್ನು ಶಿಕ್ಷಕರಿಗೆ ತಲುಪಿಸಿ\’ ಎಂದು ಸಹ ಬರೆದು ಶೇರ್ ಮಾಡಲಾಗಿದೆ.
ಸದ್ಯ ಕನ್ನಡವಾಣಿ ವೆಬ್ ಮಾಧ್ಯಮದ ಸರ್ವರ್ ಸಮಸ್ಯೆಯಲ್ಲಿದ್ದು, ಇದೇ ವೇಳೆ ಕಿಡಿಗೇಡಿಗಳು ತಮ್ಮ ಕೃತ್ಯ ಮೆರೆದಿದ್ದಾರೆ. ಫೋಟೋಶಾಫ್ ಬಳಸಿ ಈ ಕೃತ್ಯ ಎಸೆಗಲಾಗಿದೆ\’ ಎಂದು ಶೋಭಾ ಸಾಗರ್ `S News ಡಿಜಿಟಲ್\’ಗೆ ತಿಳಿಸಿದರು. `ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ದೂರು ದಾಖಲಿಸುವುದು ಅನಿವಾರ್ಯ\’ ಎಂದವರು ಎಚ್ಚರಿಸಿದರು.
ಸ್ಪಷ್ಟನೆ:
ಇತ್ತಿಚಿಗೆ ಸಂಬoಧಿಸಿದ `S News ಡಿಜಿಟಲ್\’ಗೆ ಸಂಬoಧಿಸಿದ ಸ್ಕೀನ್ ಶಾಟ್\’ಗಳನ್ನು ಸಹ ಕೆಲವರು ಎಡಿಟ್ ಮಾಡಿ, ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಸ್ಕೀನ್ ಶಾಟ್ ಮೂಲಕ ಬರುವ ಸಂಗತಿಗಳು ಸತ್ಯವಲ್ಲ. ಅಧಿಕೃತ ಲಿಂಕ್ ಮೂಲಕ ಬರುವ ಸುದ್ದಿಗಳಿಗೆ ಮಾತ್ರ `S News ಡಿಜಿಟಲ್\’ ಜವಾಬ್ದಾರಿ.
`ಸುಳ್ಳು ಸುದ್ದಿ ಡಿಲಿಟ್ ಮಾಡಿ. ಸತ್ಯವನ್ನು ಶೇರ್ ಮಾಡಿ\’