ಮಕ್ಕಳ ಕೈಗೆ ಬೈಕ್ ನೀಡಿದ ಪ್ರತಿ ಪಾಲಕರಿಗೆ ನ್ಯಾಯಾಲಯ 25-30 ಸಾವಿರ ರೂ ದಂಡ ವಿಧಿಸಿದ ನಿದರ್ಶನಗಳಿದ್ದರೂ ದಾಂಡೇಲಿ ಪೊಲೀಸರು 21 ಬೈಕ್ ಮಾಲಕರಿಂದ ಒಟ್ಟು 18 ಸಾವಿರ ರೂ ವಸೂಲಿ ಮಾಡಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಹೀಗಾಗಿ ಸರ್ಕಾರಿ ಖಜಾನೆಗೆ ಪಾವತಿಯಾಗಬೇಕಿದ್ದ ದೊಡ್ಡ ಮೊತ್ತದ ದಂಡದ ಹಣ ಪಾಲಕರಿಗೆ ಉಳಿತಾಯವಾಗಿದೆ.
ದಾಂಡೇಲಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಹಿನ್ನಲೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ 21 ವಾಹನಗಳು ಸಿಕ್ಕಿಬಿದ್ದಿದ್ದು, ಕೆಲವರು ದೊಡ್ಡವರಿಂದ ಫೋನು ಮಾಡಿಸುವ ಪ್ರಯತ್ನ ನಡೆಸಿದರು. ಆದರೆ, ಪೊಲೀಸರು ಅದಕ್ಕೆ ಬಗ್ಗದೇ ಎಲ್ಲರನ್ನು ಠಾಣೆಗೆ ಕರೆಯಿಸಿ ಬುದ್ದಿ ಹೇಳಿದರು.
ಪಿಸೈ ಯಲ್ಲಪ್ಪ ಹಾಗೂ ಡಿವೈಎಸ್ಪಿ ಶಿವಾನಂದ ಅವರು ಮಕ್ಕಳ ಪಾಲಕರಿಗೆ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಿದರು. ಮಕ್ಕಳ ಕೈಲಿ ಬೈಕ್ ಕೊಟ್ಟು ಮತ್ತೆ ಸಿಕ್ಕಿಬಿದ್ದರೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.
ಅಪ್ರಾಪ್ತರ ಬೈಕ್ ಚಾಲನೆ ಹಾಗೂ ಅವಘಡಗಳ ಕುರಿತು `S News\’ ಡಿಜಿಟಲ್ ಅಗಷ್ಟ 1ರಂದು ವರದಿ ಪ್ರಕಟಿಸಿತ್ತು. ಆ ವರದಿಯನ್ನು ಇಲ್ಲಿ ಓದಿ..
https://sirinews.in/dndbike/