ಮುಂಡಗೋಡ: ಆನಂದನಗರದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಅಂಗಡಿಯಿರುವ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅದನ್ನು ತೆರವು ಮಾಡುವ ಧೈರ್ಯ ಯಾರಿಗೂ ಇಲ್ಲ!
ಕಳೆದ ಅನೇಕ ವರ್ಷಗಳಿಂದ ದೇವಸ್ಥಾನದ ಅಂಚಿನಲ್ಲಿ ಸರಾಯಿ ಅಡ್ಡೆಯಿದ್ದರೂ ಅದನ್ನು ಜನಪ್ರತಿನಿಧಿಗಳು ಪ್ರಶ್ನಿಸಿಲ್ಲ. ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ಅಲ್ಲಿನ ಮಹಿಳೆಯರು ಈ ಬಗ್ಗೆ ಅಳಲು ತೋಡಿಕೊಂಡರು. `ಆನಂದ ನಗರದಲ್ಲಿ ಕೆಲವರು ಎಗ್ಗಿಲ್ಲದೇ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅವರು ಯಾರ ಮಾತು ಕೇಳುತ್ತಿಲ್ಲ. ಅವರಿಗೆ ಯಾರ ಭಯವೂ ಇಲ್ಲ. `ದೊಡ್ಡವರ\’ ಕೃಫೆಯಿಂದಲೇ ಇದೆಲ್ಲವೂ ನಡೆಯುತ್ತಿದೆ\’ ಎಂದು ಕ್ಷೇತ್ರದ ಜನಸ್ಪಂದನಾ ಸಭೆಯಲ್ಲಿ ದೂರಿದರು. ಅದರಂತೆ `ಇನ್ನೂ ಎರಡು ಕಡೆ ಸರಾಯಿ ಅಂಗಡಿಯಿದ್ದು, ದೇವಸ್ಥಾನದ ಮತ್ತು ಶಾಲೆಯ ಅಸುಪಾಸಿನಲ್ಲಿ ವ್ಯವಹಾರ ನಡೆಯುತ್ತಿದೆ\’ ಎಂದು ದೂರಿದರು.
`ಅಕ್ರಮ ಸರಾಯಿ ಅಡ್ಡೆಯಿಂದಾಗಿ ಆಸುಪಾಸಿನ ಜನರಿಗೆ ಕಿರಿಕಿರಿಯಾಗಿದೆ. ಮಹಿಳೆಯರು ಈ ಭಾಗದಲ್ಲಿ ಓಡಾಡುವುದೇ ಕಷ್ಟವಾಗಿದೆ\’ ಎಂದು ಅಳಲು ತೋಡಿಕೊಂಡರು. ಮಹಿಳೆಯರ ಮನವಿ ಸ್ವೀಕರಿಸಿದವರು ಇದಕ್ಕೆ ತಲೆಯಾಡಿಸಿದರು.