ದಾoಡೇಲಿ: `ನಗರವ್ಯಾಪ್ತಿಯಲ್ಲಿ ಜಿ +2 ಪಿಎಂಎವೈ ಯೋಜನೆಯ ಮನೆ ಹಂಚಿಕೆ ವಿಷಯವಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ\’ ಎಂದು ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `108 ಮನೆಗಳ ಹಸ್ತಾಂತರವನ್ನು ಮಾಡಿದ್ದು, ಹಂಚಿಕೆ ಮಾಡಲಾದಂತಹ ಎಲ್ಲಾ ಫಲಾನುಭವಿಗಳು ತಮಗೆ ಹಂಚಿಕೆ ಮಾಡಲಾದ ಮನೆಯಲ್ಲಿ ಹೋಗಿ ತಾವು ವಾಸವಾಗಲು ಸೂಚಿಸಲಾಗಿದೆ. ಆ ಮನೆಯನ್ನು ಅವರ ಹೆಸರಿಗೆ ನೋಂದಣಿ ಮಾಡಲು ಸರ್ಕಾರಕ್ಕೆ 500ರೂ ಪಾವತಿಸಬೇಕಿದೆ. ಮನೆಯನ್ನು ಬಾಡಿಗೆಗೆ ಕೊಡಲು ಯಾರಿಗೂ ಅವಕಾಶವಿಲ್ಲ\’ ಎಂದರು.