ಕಾರವಾರ: `ಪರಿಶಿಷ್ಟ ಪಂಗಡದ ಸಿದ್ದಿ ಸಮುದಾಯದವರಿಗೆ ನೀಡುತ್ತಿರುವ ಆಹಾರ ಸಾಮಗ್ರಿ ಕಳಪೆಯಾಗಿದ್ದು, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಮೂಲಕ ಇದನ್ನು ವಿತರಿಸಲಾಗಿದೆ. ಈ ಕಿಟ್ ಮೇಲೆ ಸಹ ಪೂರೈಕೆದಾರರ ಬಗ್ಗೆ ಯಾವುದೇ ಮಾಹಿತಿ ಇಲ್ಲ\’ ಎಂದು ವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಿದ್ದಿ ಜನರಿಗೆ ಮಳೆಗಾಲದಲ್ಲಿ ಕೆಲಸ ಸಿಗುವುದು ಕಡಿಮೆ. ಹೀಗಾಗಿ ಅಪೌಷ್ಟಿಕತೆ ನಿವಾರಣೆಗೆ ಜೂನ್ದಿಂದ ಡಿಸೆಂಬರ್ವರೆಗೆ ಆಹಾರ ನೀಡುವ ಯೋಜನೆಯಿದ್ದು, ಪೂರೈಕೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ\’ ಎಂದು ದೂರಿದರು. `ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಪೂರೈಸುವ ಆಹಾರ ಪದಾರ್ಥ ಕಳಪೆ ಗುಣಮಟ್ಟದಿಂದ ಕೂಡಿದೆ. 75 ಮೈಕ್ರೊ ಏಕಬಳಕೆ ಪ್ಲಾಷ್ಟಿಕ್ ಬ್ಯಾನ್ ಮಾಡಿದರೂ ಅದರಲ್ಲಿಯೇ ಪೂರೈಕೆ ನಡೆದಿದೆ. ಹೀಗಾಗಿ ಪೂರೈಕೆದಾರರ ಮೇಲೆ ಕ್ರಮವಾಗಬೇಕು\’ ಎಂದು ಆಗ್ರಹಿಸಿದರು.