ಕುಮಟಾ: ಕೋನಳ್ಳಿಯಲ್ಲಿ ಸತ್ಯಪ್ಪ ಕೃಷ್ಣ ನಾಯ್ಕ ಅವರಿಗೆ ಸೇರಿದ ದನದ ಕೊಟ್ಟಿಗೆ ಒಂದು ಭಾಗದ ಗೋಡೆ ಕುಸಿದಿದೆ. ಇದರಿಂದ ಕೊಟ್ಟಿಗೆಯದ್ದ ಹಸುವಿನ ಕಾಲು ಮುರಿದಿದೆ.
ಕೊಟ್ಟಿಗೆಯೊಳಗಿದ್ದ ಮಣ್ಣನ್ನು ಹೊರತೆಗೆಯಲಾಗಿದ್ದು, ನಾಟಿ ವೈದ್ಯರು ಆಗಮಿಸಿ ಚಿಕಿತ್ಸೆ ಕೊಡುವ ಪ್ರಯತ್ನ ನಡೆಸಿದ್ದಾರೆ. ಮೂರೂರು ಗ್ರಾಮದ ಮುಸಬುಪ್ಪಾ ಎಂಬಲ್ಲಿ ಧರೆಗೆ ಹೊಂದಿಕೊAಡಿದ್ದ ದೊಡ್ಡ ಬಂಡೆಗಲ್ಲು ಮಳೆಯ ರಭಸಕ್ಕೆ ಕುಸಿದು ರಸ್ತೆಗೆ ಬಂದು ಬೀಳುವ ಹಂತದಲ್ಲಿದೆ. ಇನ್ನೂ ಮಳೆ ರಭಸಕ್ಕೆ ಕಲ್ಲಬ್ಬೆ ಬಳಿಯ ಮಂಜುಮನೆ ರಸ್ತೆ ಮೇಲೆ ಧರೆ ಕುಸಿದಿದೆ. ರಸ್ತೆ ಮೇಲೆ ಬಿದ್ದ ಮಣ್ಣನ್ನು ಬದಿಗೆ ಸರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಅದಾಗಿಯೂ ಇನ್ನಷ್ಟು ಮಣ್ಣು ಕುಸಿಯುವ ಸಾಧ್ಯತೆಗಳಿವೆ. ಹೀಗಾಗಿ ಎದುರುಮನೆಯಲ್ಲಿ ವಾಸವಿರುವವರಿಗೆ ಸ್ಥಳಾಂತರವಾಗುವoತೆ ಕಂದಾಯ ಅಧಿಕಾರಿಗಳು ಸೂಚಿಸಿದ್ದಾರೆ.