ದಾಂಡೇಲಿ: ಬೊಮನಳ್ಳಿ ಅಣೆಕಟ್ಟಿನ ಬಸ್ ನಿಲ್ದಾಣದ ಬಳಿ ಹಸಿ ಗಾಂಜಾ ಮಾರಾಟ ಮಾಡುತ್ತಿದ್ದ ರವಿ ಪಾಲದೊರೆ ನಾಡರ್ (56) ಹಾಗೂ ದೊಂಡು ವಿಠ್ಠು ಬಿಚುಕುಲೆ (35) ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿAದ ಬಟ್ಟೆಯಲ್ಲಿ ಅಡಗಿಸಿಟ್ಟಿದ್ದ 90 ಸಾವಿರ ರೂ ಮೌಲ್ಯದ ಗಾಂಜಾವನ್ನು ಜಪ್ತು ಮಾಡಿದ್ದಾರೆ.
ಅಗಸ್ಟ್ 1ರಂದು ಅಂಬಿಕಾ ನಗರದ ಚಾಲಕ ರವಿ ಪಾಲದೊರೆ ನಾಡರ್ ಹಾಗೂ ಯಲ್ಲಾಪುರ ಮದನೂರು ಬಳಿಯ ಮಹಾದೇವಕೊಪ್ಪದ ದೊಂಡು ವಿಠ್ಠು ಬಿಚುಕುಲೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಕೆಲ ಖಾಲಿ ಪ್ಲಾಸ್ಟಿಕ್ ಕೊಟ್ಟೆ ಹಾಗೂ 4 ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ಅಲ್ಪ-ಸ್ವಲ್ಪ ಗಾಂಜಾ ತುಂಬಿ ಮಾರಾಟ ಮಾಡುತ್ತಿದ್ದರು. ಪಿಸೈ ಹುಸನ್ಸಾಬ್ ಅವರನ್ನು ವಿಚಾರಿಸಿದಾಗ ಬೈಕಿನಲ್ಲಿ ಗಾಂಜಾ ಇರುವುದು ಗೊತ್ತಾಗಿದೆ. ಗಾಂಜಾ ಮಾರಾಟದಿಂದ ಬಂದ 1200ರೂ ಹಣವೂ ಸಿಕ್ಕಿದೆ. ಕೂಡಲೇ ಬೈಕ್ಸಹಿತ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.