
ಶಿರಸಿ: ಬನವಾಸಿ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ನಯಾಜುಲ್ಲಾ ಅಬ್ದುಲ್ ಎಂಬಾತನಿನಿಗೆ ಬಸವರಾಜ ಮಹಾದೇವಪ್ಪ ಎಂಬಾತ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಕಾಲು ಮುರಿದಿದೆ.
ಈಡೂರು ತಿರುವಿಗಿಂತ ಸ್ವಲ್ಪ ಮುಂದೆ ಈ ಅಪಘಾತ ನಡೆದಿದೆ. ಬೆಂಗಳೂರಿನಿoದ ಕಾರು ಓಡಿಸಿಕೊಂಡು ಬಂದ ಬಸವರಾಜ ಮಹಾದೇವಪ್ಪ ಏಕಾಏಕಿ ಕಾರನ್ನು ಬಲಕ್ಕೆ ತಿರುಗಿಸಿದ ಪರಿಣಾಮ ನಯಾಜುಲ್ಲಾ ಅಬ್ದುಲ್ ಓಡಿಸುತ್ತಿದ್ದ ಬೈಕಿಗೆ ಅಪಘಾತವಾಗಿದೆ. ಇದರಿಂದ ಸಯಾಜುಲ್ಲಾನ ಕಾಲಿನ ಪಾದದ ಮೂಳೆ ಮುರಿದಿದ್ದು, ಕೈ ಹಾಗೂ ತಲೆಗೂ ಪೆಟ್ಟಾಗಿದೆ. ಬೈಕಿನಲ್ಲಿ ಹಿಂದೆ ಕೂತಿದ್ದ ರಹೀಮ್ ಸಾಬ್ಗೆ ಸಹ ಗಾಯವಾಗಿ ರಕ್ತ ಬಂದಿದೆ.