
ಕಾರವಾರ: ಕಾಳಿ ನದಿ ಸೇತುವೆ ಮೇಲೆ ಸೈಕಲ್ ತುಳಿಯುತ್ತಿದ್ದ ಸಾಜೀದ್ ಶೇಖ್\’ಗೆ (46) ದಾಮೋದರ ವಾರಕರ್ ಎಂಬಾತ ಹಿಂದಿನಿoದ ರಿಕ್ಷಾ ಗುದ್ದಿದ್ದಾನೆ. ಇದರಿಂದ ಸೈಕಲ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಸದಾಶಿವಗಡದ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುವ ಸಾಜೀದ್ ಅಗಸ್ಟ 1ರ ರಾತ್ರಿ 8.45ಕ್ಕೆ ಕಾರವಾರದಿಂದ ಸೈಕಲ್ ಮೇಲೆ ಹೊರಟಿದ್ದ. ಕಾಳಿ ಸೇತುವೆ ಮೇಲೆ ಸಹ ಎಡಭಾಗದಿಂದ ಸಂಚರಿಸುತ್ತಿದ್ದ. ಆಗ ರಿಕ್ಷಾ ಓಡಿಸಿಕೊಂಡು ಅದೇ ಮಾರ್ಗದಲ್ಲಿ ಬಂದ ಕೋಡಿಭಾಗ ತಾರಿವಾಡದ ದಾಮೋದರ ತೀರಾ ಎಡಕ್ಕೆ ಬಂದು ಸೈಕಲ್\’ಗೆ ಗುದ್ದಿದ್ದಾನೆ. ಇದರಿಂದ ಸೈಕಲ್ ಸವಾರನಿಗೆ ತಲೆ ಹಿಂಬಾಗ ಗಾಯವಾಗಿ ರಕ್ತ ಸೋರುತ್ತಿದೆ. ಕಾಲಿಗೆ ಸಹ ಗಾಯವಾಗಿದೆ.