ಕುಮಟಾ: ಗೋಕರ್ಣ ಭದ್ರಕಾಳಿ ಕಾಲೇಜಿನಿಂದ ಓಂ ಕಡಲತೀರಕ್ಕೆ ತೆರಳುವ ಸಿಮೆಂಟ್ ರಸ್ತೆ ಮತ್ತೆ ಕುಸಿದಿದೆ.
ರಸ್ತೆ ಹಾಳಾದರೂ ಈ ಭಾಗದಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ರಸ್ತೆ ಕುಸಿದ ಬಗ್ಗೆ ಯಾವುದೇ ಮಾಹಿತಿ ಫಲಕ ಇಲ್ಲದ ಕಾರಣ ದೊಡ್ಡ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. 500 ಮೀ ರಸ್ತೆ ನಿರ್ಮಾಣಕ್ಕೆ ಕೋಟಿ ರೂ ವೆಚ್ಚ ಮಾಡಲಾಗಿತ್ತು. ಗುಡ್ಡದ ಮೇಲೆ ಈ ರಸ್ತೆ ಹಾದು ಹೋಗಿದ್ದರಿಂದ ಮೊದಲೇ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ಇದೀಗ ಮತ್ತೆ ಕುಸಿದಿದೆ.