ಯಲ್ಲಾಪುರ: ಅಕ್ರಮ ಸಕ್ರಮದ ಅಡಿ ಆಶಾಬಿ ಗಪೂರ್ ಶೇಖ್ ಎಂಬಾತರಿಗೆ ಮಂಜೂರಾದ ಭೂಮಿಸಹಿತ ಮನೆಯನ್ನು 45 ಲಕ್ಷ ರೂ ನೀಡಿ ಖರೀದಿಸಿದ ರಾಮಚಂದ್ರ ಗೋಪಾಲಕೃಷ್ಣ ಶೇಟ್ ಎಂಬಾತರಿಗೆ ಇದೀಗ ಸಂಕಷ್ಟ ಎದುರಾಗಿದೆ.
ರವೀಂದ್ರ ನಗರದ ರಾಮಚಂದ್ರ ಗೋಪಾಲಕೃಷ್ಣ ಶೇಟ್ ಅವರು ವಾರ್ಡ ನಂ 5ರ ಉದ್ಯಮ ನಗರದಲ್ಲಿರುವ ಆಸ್ತಿಯನ್ನು 2024ರ ಫೆಬ್ರವರಿ 21ರಂದು ಆಶಾಬಿ ಗಪೂರ್ ಶೇಖ್ ಎಂಬಾತರಿoದ ಖರೀದಿಸಿದ್ದರು. ಅವರು ಆಸ್ತಿ ಖರೀದಿಸಿದ್ದರೂ ಈವರೆಗೂ ಅವರ ಹೆಸರಿಗೆ ಆಸ್ತಿಯ ಹಕ್ಕು ವರ್ಗವಾಗಿಲ್ಲ. ಆಸ್ತಿ ಹಕ್ಕು ವರ್ಗಾವಣೆಗೆ ನೀಡಿದ ಅರ್ಜಿಯನ್ನು ಪಟ್ಟಣ ಪಂಚಾಯತ 31 ಜುಲೈ 2024ರಂದು ತಿರಸ್ಕರಿಸಿದೆ.
ಈ ಆಸ್ತಿ ಅಕ್ರಮ ಸಕ್ರಮ ಯೋಜನೆ ಅಡಿ 2010ರಲ್ಲಿ ಆಶಾಬಿ ಗಪೂರ್ ಶೇಖ್ ಅವರಿಗೆ ಮಂಜೂರಿಯಾಗಿದ್ದು, ಮಂಜೂರಿ ವೇಳೆ 25 ವರ್ಷ ಪರಾಧೀನ ಮಾಡಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆ ಷರತ್ತು ಮೀರಿ ಆಸ್ತಿ ಮಾರಾಟ ಮಾಡಿದ ಬಗ್ಗೆ ಬಾಳಗಿಮನೆಯ ಮಂಜುನಾಥ ವಿ ಹೆಗಡೆ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಗೆ ದೂರು ಸಲ್ಲಿಸಿದ್ದರು. ತಹಶೀಲ್ದಾರ್ ಕಚೇರಿಯಿಂದ ಈ ದೂರು ಪಟ್ಟಣ ಪಂಚಾಯತಗೆ ವರ್ಗವಾಗಿದ್ದು, ಈ ದೂರಿನ ವಿಚಾರಣೆ ನಡೆಸಿ ಆಸ್ತಿ ವರ್ಗಾವಣೆಯನ್ನು ಪ ಪಂ ತಡೆ ಹಿಡಿದಿದೆ.