ಅಂಕೋಲಾ: ಜುಲೈ 16ರಂದು ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಕಣ್ಮರೆಯಾಗಿರುವ ಗಂಗೆಕೊಳ್ಳದ ಲೋಕೇಶ ನಾಯ್ಕ ಕುಟುಂಬದವರನ್ನು ಅರುಣಾನಂದ ಸ್ವಾಮೀಜಿ ಭೇಟಿ ಮಾಡಿ ಸಾಂತ್ವಾನ ಹೇಳಿದರು.
ಸದಾ ತಮ್ಮೊಂದಿಗೆ ಇರುವುದಾಗಿ ಸ್ವಾಮೀಜಿ ಭರವಸೆ ನೀಡಿದ್ದು, ನೊಂದವರಿಗೆ ಧೈರ್ಯ ತುಂಬಿದರು. `ಈ ದುರ್ಘಟನೆಯಲ್ಲಿ ಇಲ್ಲಿಯವರೆಗೆ ಒಂದೇ ಕುಟುಂಬದ ನಾಲ್ವರು ಸೇರಿದಂತೆ 8 ಜನರು ಸಾವನ್ನಪ್ಪಿದ್ದು, ಅಧಿಕೃತವಾಗಿ ಇನ್ನು ಮೂರು ಜನರು ನಾಪತ್ತೆಯಾಗಿದ್ದಾರೆ. ಅವರಲ್ಲಿ ಈ ಲೋಕೇಶ ನಾಯ್ಕ ಕೂಡ ಒಬ್ಬರಾಗಿದ್ದಾರೆ. ಅವರ ಪತ್ತೆಗೆ ತಾನೂ ಪ್ರಾರ್ಥಿಸುವೆ\’ ಎಂದು ಅವರು ಹೇಳಿದರು. ಸಾಮಾಜಿಕ ಹೋರಾಟಗಾರ ರಾಜು ಮಾಸ್ತಿಹಳ್ಳ, ನಾಡುಮಾಸ್ಕೇರಿ ಗ್ರಾ.ಪಂ. ಸದಸ್ಯ ಚಂದ್ರಶೇಖರ ನಾಯ್ಕ, ಪಾಂಡುರAಗ ನಾಯ್ಕ, ಕೇಶವ ನಾಯ್ಕ ಇತರರು ಇದ್ದರು.