ಕುಮಟಾ: ಹೊಸ್ಕೇರಿ ಗ್ರಾಮದ ಬಲೀಂದ್ರ ಸಣ್ಣು ಗೌಡ ಅವರ ಮನೆ ಮಳೆಗೆ ಹಾನಿಯಾಗಿದೆ.
ಬಂಕಿಕೋಡ್ಲದಲ್ಲಿ ಸುಮಿತ್ರಾ ಮಹದೇವ ಅಗೇರ ಅವರ ಮನೆಯ ಮೇಲ್ಛಾವಣಿ ಸಹ ಕುಸಿದಿದೆ. ಹೊಳೆಗದ್ದೆಯಲ್ಲಿ ಆರತಿ ಅರುಣಾ ಶ್ಯಾನಭಾಗ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಕರ್ಣದ ತಲಗೇರಿಯ ಹುಲಿಯಾ ತುಳಸು ಗೌಡ ಅವರ ಮನೆಯ ಶೌಚಾಲಯ ನೆಲಕಚ್ಚಿದೆ. ಮಣಕಿ ವಿವೇಕ ನಗರದ ಬಾದೇವಿ ಹನುಮಂತ ಮುಕ್ರಿ ಅವರ ಮನೆಯ ಮೇಲೆ ಮಾವಿನ ಮರ ಬಿದ್ದಿದೆ. ಹೆಗಡೆ ಗ್ರಾಮದ ತಾರಿಬಾಗಿಲ ಬಳಿಯ ದಿನೇಶ ನಾಗಪ್ಪ ನಾಯ್ಕ ಅವರ ಮನೆ ಗೋಡೆ ಕುಸಿದಿದೆ.
ಒಟ್ಟಾರೆಯಾಗಿ ಮಳೆ ಮುಂದುವರೆದ ಪರಿಣಾಮ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.