ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬೆನಕಾ ರಾಜೀವ ನಾಯಕ (26) ಎಂಬಾತರು ಓಡಿಸುತ್ತಿದ್ದ ಬೈಕಿಗೆ ಕಾರವಾರದ ವಕೀಲ ರಾಜಶೇಖರ ಮಹಾರುದ್ರ ನಾಯ್ಕ (63) ಕಾರು ಗುದ್ದಿದ್ದು, ಇದರಿಂದ ಬೆನಕಾ ಅವರ ಕೈ-ಕಾಲು ಜೊತೆ ಹಲ್ಲಿಗೆ ಪೆಟ್ಟಾಗಿದೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿ ಬೆನಕಾ ಅವರು ಅಂಕೋಲಾ ತಾಲೂಕಿನ ಕಣಿಗಲ್ ಚಿಟಗೇರಿ ಮೂಲದವರು. ಪ್ರಸ್ತುತ ಯಲ್ಲಾಪುರ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಅವರು ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಅಗಸ್ಟ್ 3ರಂದು ಬೈಕಿನಲ್ಲಿ ಬರುತ್ತಿದ್ದರು. ಯಲ್ಲಾಪುರ ಅಂಕೋಲಾ ಮಾರ್ಗವಾಗಿ ಕಾರು ಓಡಿಸುತ್ತಿದ್ದ ಕಾರವಾರದ ಕೊಡಿಭಾಗ ದುರ್ಗಾದೇವಿ ದೇವಸ್ಥಾನ ಬಳಿಯ ವಕೀಲ ರಾಜಶೇಖರ ನಾಯ್ಕ ಗುಳ್ಳಾಪುರದ ಉಡುಪಿ ಗ್ರಾಂಡ್ ಹೊಟೇಲ್ ಬಳಿ ತಲುಪಿದಾಗ ಅವರ ಕಾರಿನ ಟೈಯರ್ ಸ್ಪೋಟವಾಗಿದೆ. ಪರಿಣಾಮ ಕಾರು ಏಕಾಏಕಿ ವಾಲಿದ್ದು, ಎದುರಿನಿಂದ ಬರುತ್ತಿದ್ದ ಬೆನಕಾ ಅವರ ಬೈಕಿಗೆ ಡಿಕ್ಕಿಯಾಗಿದೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.