ಕುಮಟಾ: ಅಳ್ವೆಕೊಡಿಯ ಶಾಂತಾ ನರೋನಾ (65) ಎಂಬಾತರು ಮನೆಯವರ ಮೇಲಿನ ಮುನಿಸಿನಿಂದ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ಅಳ್ವೆಕೊಡಿ ಕಲಭಾಗದ ಶಾಂತಾ ನರೋನಾ ವಿಪರೀತ ಸರಾಯಿ ಕುಡಿಯುತ್ತಿದ್ದರು. ಮಧ್ಯ ಸೇವನೆ ಮಾಡದಂತೆ ಅವರಿಗೆ ಪತ್ನಿ ಬುದ್ದಿ ಹೇಳಿದ್ದರು. ಇದೇ ವಿಷಯವಾಗಿ ಜುಲೈ 30ರಂದು ಹೆಂಡತಿ ಜೊತೆ ಜಗಳ ನಡೆದಿತ್ತು. ಅದೇ ದಿನ ಮನೆಬಿಟ್ಟು ಹೋಗಿದ್ದ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಅಗಸ್ಟ್ 3ರಂದು ಮನೆ ಪಕ್ಕದ ಜಮೀನಿನಲ್ಲಿರುವ ಗಿಟಗಂಟಿಗಳ ನಡುವೆ ಅವರ ಶವ ದೊರೆತಿದೆ. ಅಲ್ಲಿದ್ದ ವಾಟೆಮರಕ್ಕೆ ನೇಣು ಬಿಗಿದುಕೊಂಡು ಅವರು ಸಾವನಪ್ಪಿದ್ದಾರೆ.