ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿರುವ ಪೊಲೀಸರು ಶನಿವಾರ ರಾತ್ರಿ ಅಂಕೋಲಾದಲ್ಲಿ ಕಾರ್ಯಾಚರಣೆ ನಡೆಸಿ ಆದರ್ಶ ನಾರ್ವೇಕರ್ (42) ಎಂಬ ಜೂಜುಕೋರನನ್ನು ವಶಕ್ಕೆ ಪಡೆದಿದ್ದಾರೆ.
ಕಾಕರಮಠದ ಆದರ್ಶ ನಾರ್ವೇಕರ್ ಬಾಂಡಿಕಟ್ಟಾ ಬಳಿ ಗೂಡಂಗಡಿ ನಡೆಸುತ್ತಿದ್ದ. ದಾರಿಯಲ್ಲಿ ಹೋಗುತ್ತಿದ್ದವರನ್ನು ಕರೆದು ಮಟ್ಕಾಗೆ ಹಣ ಕಟ್ಟುವಂತೆ ಪೀಡಿಸುತ್ತಿದ್ದ. ಅದೃಷ್ಟ ತಾಗಿದರೆ 1 ರೂಪಾಯಿಗೆ 80 ರೂ ಕೊಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ. ಆತನ ಮೇಲೆ ದಾಳಿ ನಡೆಸಿದ ಪೊಲೀಸರು ಆತನ ಬಳಿಯಿದ್ದ 410ರೂಪಾಯಿ ಹಣದ ಜೊತೆ ಮಟ್ಕಾ ಚೀಟಿ, ಅಂಕಿ-ಸoಖ್ಯೆ ಬರೆಯಲು ಬಳಸುತ್ತಿದ್ದ ಎರಡು ಬಾಲ್ ಪೆನ್\’ನ್ನು ನ್ಯಾಯಾಲಯಕ್ಕೆ ಒಪ್ಪಿಸುವುದಕ್ಕಾಗಿ ವಶಕ್ಕೆ ಪಡೆದಿದ್ದಾರೆ.