ಶಿರಸಿ: ಮಳಲಿ ಅರಣ್ಯ ಪ್ರದೇಶದಲ್ಲಿ ಇಸ್ಪಿಟ್ ಆಡುತ್ತಿದ್ದ ಆರು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತರಿoದ 20140ರೂ ನಗದು, ಇಸ್ಪಿಟ್ ಎಲೆ, ಮೇಣದಬತ್ತಿ ಹಾಗೂ ನೆಲಕ್ಕೆ ಹಾಕಿಕೊಂಡಿದ್ದ ಚಾಪೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಹುಣಸೆಕೊಪ್ಪದ ರಮೇಶ ಕೆರಿಯಾ ಗೌಡ (34), ನೆಗ್ಗುವಿನ ಪರಮೇಶ್ವರ ಈರಾ ಗೌಡ (63) ಹೊಸ್ತೋಟದ ರಮೇಶ ಕೋಮಲ ಗೌಡ (40) ಮಲಳಿಯ ಪ್ರಶಾಂತ ಬಂಗಾರಿ ಗೌಡ (32), ಸಿದ್ದಾಪುರ ಆಡ್ಕುಳಿಯ ದತ್ತ ಮಾಬ್ಲು ಗೌಡ (55), ಈಶ್ವರ ಮಾರ್ಯಾ ಗೌಡ (65) ಬಂಧಿತರು. ಅಗಸ್ಟ್ 4ರ ಮಧ್ಯಾಹ್ನ ಈ ದಾಳಿ ನಡೆದಿದೆ.