ಹೊನ್ನಾವರ: ಮೀನುಗಾರಿಕೆ ನಡೆಸಲು ಹೊನ್ನಾವರಕ್ಕೆ ಆಗಮಿಸಿದ್ದ ಜಾರ್ಖಂಡ್\’ದ ಕುಂಭಕರ್ಣ ಕಣ್ಮರೆಯಾಗಿದ್ದು, ಆತನ ತಮ್ಮನ ಮಗ ದೇವಕರಣ ಹುಡುಕಾಡುತ್ತಿದ್ದಾನೆ.
ಹೊನ್ನಾವರದ ಕಾಸರಗೋಡಿನಲ್ಲಿ ಈ ಇಬ್ಬರು ಜೊತೆಯಲ್ಲಿ ವಾಸವಾಗಿದ್ದರು. ಒಟ್ಟಿಗೆ ಮೀನು ಹಿಡಿಯುವ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ್ 3ರ ರಾತ್ರಿ 9ಗಂಟೆಗೆ ಮನೆಯಿಂದ ಹೊರಹೋದ ಕುಂಭಕರ್ಣ ಮರುದಿನ ಬೆಳಗಾದರೂ ಮರಳಲಿಲ್ಲ. ಇಡೀ ದಿನ ಹುಡುಕಿದರೂ ಆತ ಕಾಣದ ಕಾರಣ ಕುಂಭಕರ್ಣನನ್ನು ಹುಡುಕಿಕೊಡುವಂತೆ ದೇವಕಣ ಪೊಲೀಸರ ಮೊರೆ ಹೋಗಿದ್ದಾನೆ.