ದಾಂಡೇಲಿ: ಈವರೆಗೆ ಐವರನ್ನು ಬಲಿ ಪಡೆದ ಮೊಸಳೆಗಳಿರುವ ಪ್ರದೇಶದಲ್ಲಿ ಹೆಸ್ಕಾಂ ಸಿಬ್ಬಂದಿ 4 ಗಂಟೆಗಳ ಕಾಲ ಗುದ್ದಾಟ ನಡೆಸಿ ವಿದ್ಯುತ್ ತಂತಿ ಸರಿಪಡಿಸಿದರು.
ಕುಳಗಿ ರಸ್ತೆ ಪ್ರದೇಶ ವ್ಯಾಪ್ತಿಯಲ್ಲಿರುವ ಕಾಳಿ ನದಿಯ ನಡುಗಡ್ಡೆ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ಕುಳಗಿ-ಬೊಮ್ಮನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿರಲಿಲ್ಲ. ಇದನ್ನು ಅರಿತ ಹೆಸ್ಕಾಂ ಸಿಬ್ಬಂದಿ ಧೈರ್ಯದಿಂದ ಮುನ್ನುಗ್ಗಿ ಅಲ್ಲಿನ ಸಮಸ್ಯೆ ಬಗೆಹರಿಸಿದರು.
ನದಿ ದಾಟಿ ನಡುಗಡ್ಡೆಗೆ ತೆರಳಲು ಅಗತ್ಯವಿರುವ ರಾಪ್ಟ್ ಹಾಗೂ ಬೋಟುಗಳನ್ನು ಅರಣ್ಯ ಸಿಬ್ಬಂದಿ ನೀಡಿದರು. ಕಾಲು ಹುಗಿಯುವ ಸ್ಥಿತಿಯಲ್ಲಿದ್ದರೂ ತುಂಡಾದ ವಿದ್ಯುತ್ ತಂತಿಗಳನ್ನು ಜೋಡಿಸಿದರು.