ಉತ್ತರ ಕನ್ನಡ ಜಿಲ್ಲೆಯ 200ಕ್ಕೂ ಅಧಿಕ ಸರ್ಕಾರಿ ಶಾಲೆಗಳು ಸೋರುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಅರಿವಿದ್ದರೂ ಸೋರುವ ನೀರನ್ನು ತಡೆ ಹಿಡಿದಿಲ್ಲ. ಹೀಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಮಕ್ಕಳು ಶೀತ-ಜ್ವರದ ನಡುವೆ ನಡುಗುತ್ತ ಪಾಠ ಕೇಳಬೇಕಿದೆ.
ಭಾರೀ ಗಾಳಿ ಮಳೆಗೆ ಕೆಲವೆಡೆ ಶಾಲಾ ಮೇಲ್ಛಾವಣಿ ಕುಸಿದು ಹಾನಿಯಾಗಿದೆ. ಕೆಲವೆಡೆ ಶಾಲಾ ಬಿಸಿಯೂಟದ ಕೋಣೆಯಲ್ಲಿಟ್ಟಿದ್ದ ಆಹಾರ ಧಾನ್ಯಗಳಿಗೆ ನೀರು ತಗುಲಿ ಅವು ಹಾಳಾಗಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು ಕುಸಿಯುವ ಆತಂಕದಲ್ಲಿದೆ. ಈ ಬಗ್ಗೆ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವರು ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.