ಸಿದ್ದಾಪುರ: ಮಳೆ ಅಬ್ಬರಕ್ಕೆ ಸಣ್ಣಗಮನಿ ಗ್ರಾಮೀಣ ರಸ್ತೆ ಕೊಚ್ಚಿ ಹೋಗಿದೆ.
ಇದರಿಂದ ಕರಮನೆ, ಕಲ್ಲಾರೆಮನೆ, ಭಾನುಳಿ, ವಾಜಗಾರ, ಹುಲಿಮನೆ, ಸಂಪೇಸರ ಹಾಗೂ ಬೇಡ್ಕಣಿಗೆ ಸಂಪರ್ಕ ಕಷ್ಟವಾಗಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಈ ರಸ್ತೆ ಬೇಡ್ಕಣಿ ಹಾಗೂ ಬಿದ್ರಕಾನ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದು ಕುಸಿದ ರಸ್ತೆ ಬೇಡ್ಕಣಿ ಗ್ರಾಪಂಗೆ ಸೇರಿದ್ದಾಗಿದೆ. ಈ ಭಾಗದಲ್ಲಿ ತ್ಯಾರ್ಸಿ, ಕಡಕೇರಿ ಗ್ರಾಮದ ರೈತರ ತೋಟಗಳು ಸಹ ಬರುತ್ತಿರುವುದರಿಂದ ಅವರಿಗೆ ನಿತ್ಯ ತೋಟಕ್ಕೆ ಹೋಗಿ ಬರುವುದು ಕಷ್ಟವಾಗಿದೆ.