ಹೊನ್ನಾವರ: ಗೇರುಸೊಪ್ಪಾ ಅಣೆಕಟ್ಟಿನಿಂದ ಹೊರಬಿದ್ದ ನೀರು ವಿವಿಧ ಗ್ರಾಮಗಳಿಗೆ ಪ್ರವೇಶಿಸಿದೆ. ಹೀಗಾಗಿ ತಗ್ಗು ಪ್ರದೇಶದ ಜನ ಕಾಳಜಿ ಕೇಂದ್ರಗಳ ಕಡೆ ಮುಖ ಮಾಡಿದ್ದಾರೆ.
ಉಪ್ಪೂಣಿ ಗ್ರಾಮದ ಗಾಬಿತಕೇರಿ, ಸರಳಗಿ, ಕುದ್ರಗಿ, ಮಾಗೋಡ ಸಂಶಿ ಭಾಗದಲ್ಲಿ ನೀರು ತುಂಬುತ್ತಿದೆ. ಈ ಗ್ರಾಮದ ಅಡಿಕೆ ತೋಟಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಖರ್ವಾ ಮಾವಿನಕುರ್ವಾ ಹಡಿನಬಾಳ, ಜಲವಳ್ಳಿ, ಮಾಗೋಡ ಕೆಳಗಿನ ಇಡಗುಂಜಿ ಸೇರಿದಂತೆ ನದಿಯುದ್ದಕ್ಕೂ ಇರುವ ತಗ್ಗು ಪ್ರದೇಶ ನಿವಾಸಿಗಳು ಆತಂಕದಲ್ಲಿದ್ದಾರೆ. ಕೆಲವರನ್ನು ದೋಣಿ ಮೂಲಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ