ಕುಮಟಾ: ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಪಾದಯಾತ್ರೆಯಿಂದ ನೇರವಾಗಿ ಕುಮಟಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಅಲ್ಲಿನ ಅಶುಚಿತ್ವದ ಬಗ್ಗೆ ಕಿಡಿಕಾರಿದರು. ನಂತರ ನೆರೆ ಪರಿಹಾರದ ಹಣ ಈವರೆಗೂ ಸಂತ್ರಸ್ತರಿಗೆ ಜಮಾ ಆಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಕೆಲಸಕ್ಕಾಗಿ ಆಗಮಿಸಿ ಕಾಯುತ್ತಿದ್ದವರನ್ನು ಮಾತನಾಡಿಸಿ, ಕೂಡಲೇ ಅವರ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
`ಕುಮಟಾದಲ್ಲಿ ನೆರೆ ಪರಿಹಾರ ವಿತರಣೆಗೆ ಸಮಸ್ಯೆ ಆಗುತ್ತಿರುವ ಬಗ್ಗೆ `S News ಡಿಜಿಟಲ್\’ `ಸಂತ್ರಸ್ತರ ಕತೆ ಅಯೋಮಯ: ಕಾಸು ಇದ್ದರೂ ಖರ್ಚು ಮಾಡುವ ಹಾಗಿಲ್ಲ\’ ಎಂದು ಜುಲೈ 30ರಂದು ವರದಿ ಪ್ರಕಟಿಸಿತ್ತು. (ಈ ಸುದ್ದಿ-ವಿಡಿಯೋ ನಂತರ ಆ ವರದಿಯ ಲಿಂಕ್ \’ನ್ನು ಪುನ: ಪ್ರಕಟಿಸಿದೆ) ಇದನ್ನು ಓದಿ ಓಡೋಡಿ ಬಂದ ದಿನಕರ ಶೆಟ್ಟಿ ಮಳೆ ಹಾಗೂ ಮನೆ ಹಾನಿಯ ವಿವರ ಪಡೆದರು. ಈವರೆಗೆ 272 ಮನೆಗಳಿಗೆ ಹಾನಿ ಆಗಿದ್ದರೂ 34 ಮನೆಹಾನಿ ಪ್ರಕರಣಗಳಿಗೆ ಮಾತ್ರ ತಲಾ 5 ಸಾವಿರ ರೂ ಜಮಾ ಆಗಿರುವ ಬಗ್ಗೆ ಕಿಡಿಕಾರಿದರು. 70 ಮನೆ ಸಂಪೂರ್ಣ ಕುಸಿತವಾಗಿದ್ದರೂ ಅವರಿಗೆ ಪರಿಹಾರದ ಮೊತ್ತ ಸಿಗದ ಬಗ್ಗೆ ತಿಳಿದು ಅಚ್ಚರಿ ವ್ಯಕ್ತಪಡಿಸಿದರು. `ಜೂನ್ ತಿಂಗಳಿನಿAದ ಮಳೆ ಶುರುವಾಗಿ ಹಾನಿ ನಡೆಯುತ್ತಿದೆ. ಆದರೆ, ಈವರೆಗೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ\’ ಎಂದು ಆಕ್ರೋಶವ್ಯಕ್ತಪಡಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಬಿಜೆಪಿ ಸರ್ಕಾರ ಸಂಪೂರ್ಣ ಮನೆ ಹಾನಿ ಆದವರಿಗೆ 5 ಲಕ್ಷ ರೂ ಹಾಗೂ ಮನೆ ಒಳಗೆ ನೀರು ಹೋದವರಿಗೆ 10 ಸಾವಿರ ರೂ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಸಂಪೂರ್ಣ ಮನೆ ಹಾನಿ ಆದವರಿಗೆ 1.20 ಲಕ್ಷ ನೀಡುವುದಾಗಿ ಹೇಳಿದ್ದು, ಕುಮಟಾದಲ್ಲಿ ಆ ಹಣವನ್ನು ಜಮಾ ಮಾಡಿಲ್ಲ\’ ಎಂದು ಆರೋಪಿಸಿದರು. `ಬಿಜೆಪಿ ಶಾಸಕರು ಇರುವ ಕಡೆ ಕಾಂಗ್ರೆಸ್ ಸರ್ಕಾರ ಸಮಸ್ಯೆ ಮಾಡುತ್ತಿದೆ. ಕುಮಟಾಗೆ ಖಾಯಂ ತಹಶೀಲ್ದಾರ್ ಇಲ್ಲದ ಕಾರಣ ಹಲವು ಸಮಸ್ಯೆಯಾಗಿದ್ದು, ತಹಶೀಲ್ದಾರರನ್ನು ನೇಮಿಸಲು ಜಿಲ್ಲಾಡಳಿತ ವಿಫಲವಾಗಿದೆ\’ ಎಂದು ದೂರಿದರು.
ಶಾಸಕ ದಿನಕರ ಶೆಟ್ಟಿ ತಹಶೀಲ್ದಾರ್ ಕಚೇರಿ ಭೇಟಿಯ ವಿಡಿಯೋ ಇಲ್ಲಿ ನೋಡಿ..
ಜುಲೈ 30ರಂದು ಎಸ್ ನ್ಯೂಸ್ ಪ್ರಕಟಿಸಿದ ವರದಿ ಇಲ್ಲಿ ಓದಿ…
https://sirinews.in/kmtthofc/