ಹಳಿಯಾಳ: ಮದ್ನಳ್ಳಿಯಲ್ಲಿ ಕಟಿಂಗ್ ಶಾಫ್ ನಡೆಸುತ್ತಿದ್ದ ಮಲ್ಲಿಕಾರ್ಜುನ ಬಸವರಾಜ ನವಲಗಿ ಕಾಣೆಯಾಗಿ ಎರಡು ತಿಂಗಳಾಗಿದೆ. ಈವರೆಗೂ ಆತನ ಸುದ್ದಿಯಿಲ್ಲ.
ಮಲ್ಲಿಕಾರ್ಜುನ ಬಸವರಾಜ ನವಲಗಿ ಹಾಗೂ ಆತನ ತಮ್ಮ ನಾಗರಾಜ ಬಸವರಾಜ ನವಲಗಿ ಒಟ್ಟಿಗೆ ಕಟಿಂಗ್ ಶಾಫ್\’ನಲ್ಲಿ ದುಡಿಯುತ್ತಿದ್ದರು. ಜೂನ್ 4ರಂದು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ತಾಯಿ ಬಳಿ ಹೇಳಿದ್ದ ಮಲ್ಲಿಕಾರ್ಜುನ್ ಅಂಗಡಿಗೆ ಬಂದಿರಲಿಲ್ಲ. ಸಂಬAಧಿಕರ ಮನೆಯಲ್ಲಿ ವಿಚಾರಿಸಿದರೂ ಆತನ ಪತ್ತೆಯಾಗಿರಲಿಲ್ಲ. ಇಷ್ಟು ದಿನಗಳ ಕಾಲ ಆತನಿಗಾಗಿ ಹುಡುಕಾಟ ನಡೆಸಿದ ಮನೆಯವರು ಇದೀಗ ಮಲ್ಲಿಕಾರ್ಜುನ ಕಾಣೆಯಾದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.